ಪದ್ಮಶಾಲಿ ಸಮಾಜದ ಮೂಲ ಪುರುಷ ಭೃಗು ಮಹರ್ಷಿ
ಇಂದು ವೈಶಾಕ ಶುಕ್ಲ ಪಕ್ಷದ ಏಕಾದಶಿ. ಸಮಸ್ತ ಪದ್ಮಶಾಲಿ ಭಾಂಧವರಿಗೂ ಭೃಗು ಮಹರ್ಷಿ ಜಯಂತಿಯ ಶುಭಾಶಯಗಳು. ಮಹರ್ಷಿಯ ಕೃಪೆ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸೋಣ.
ಬ್ರಹ್ಮಣೋ ಹೃದಯಂ ಭಿತ್ತ್ವಾ ನಿಃಸೃತೋ ಭಗವಾನ್ಭೃಗುಃ|
ಭಗವಾನ್ ಭೃಗುವು ಬ್ರಹ್ಮನ ಹೃದಯದಿಂದ ಬಂದವರು, ಈ ಭೃಗು ಮಹರ್ಷಿಯನ್ನು ಪದ್ಮಶಾಲಿಯರ ಮೂಲ ಪುರುಷ ಎಂದು ಗುರುತಿಸಲಾಗುತ್ತದೆ. ಭೃಗು ಮಹರ್ಷಿಯ ಕುರಿತು ಹಲವಾರು ಪುರಾಣ ಕಥೆಗಳಿವೆ. “ಭೃಗು ಜಾಯತೇ ಇತಿ ಭಾರ್ಗವ”ಎಂದರೆ ಮೂಲ ಪುರುಷ ಭೃಗು ಮಹರ್ಷಿಯ ವಂಶದವರು ಭಾರ್ಗವರು ಎಂದು ಕರೆಯುತ್ತಾರೆ. ವೈದಿಕ ಧರ್ಮಾಚರಣೆಯಲ್ಲಿ ಭೃಗು ಮಹರ್ಷಿ ಗೆ ಮಹತ್ತರ ಸ್ಥಾನವಿದೆ. ಇವರ ಮುಂದಾಳತ್ವದಲ್ಲಿ ಹಲವಾರು ಯಾಗ ಯಜ್ಞ ಗಳು ನಡೆದಿವೆ.
ಧಕ್ಷ ಪ್ರಜಾಪತಿಯ ಮಗಳಾದ ಖ್ಯಾತಿ ದೇವಿಯೊಂದಿಗೆ ವಿವಾಹ ಜರುಗುತ್ತದೆ.
ಖ್ಯಾತಿದೇವಿ ಪತ್ನಿಗೆ ಶ್ರೀ ಲಕ್ಷ್ಮೀದೇವಿ ವರನೀಡಿ ಅದನ್ನು ನೆರವೇರಿಸಲು ಖ್ಯಾತಿದೇವಿಯ ಉದರಲ್ಲಿ ಮಗಳಾಗಿ ಜನಿಸಿದಳು. ಅದರಿಂದ ಭಾರ್ಗವೀ ಎಂದೂ ಹೆಸರಾಯಿತು.
ಇವರಿಗೆ ಧಾತ, ವಿಧಾತ ಎನ್ನುವವರು ಪುತ್ರರಾಗಿ ಮತ್ತು ಶ್ರೀ ಲಕ್ಷ್ಮೀದೇವಿಯು ಭಾರ್ಗವಿ ಯಾಗಿ ಜನುಮಿಸುತ್ತಾರೆ.
ಬ್ರಹ್ಮನು ಸೃಷ್ಟಿಸಿದ ಅನೇಕ ಪ್ರಜಾಪತಿಗಳಲ್ಲಿ ಒಬ್ಬನು, ಭವಿಷ್ಯಸೂಚಕ ಜ್ಯೋತಿಷದ ಮೊದಲ ಸಂಕಲಕ, ಮತ್ತು ತ್ರೇತಾಯುಗದ ಅವಧಿಯಲ್ಲಿ ಬರೆದ ಅತ್ಯುತ್ಕೃಷ್ಟ ಜ್ಯೋತಿಷ ಕೃತಿ ಭೃಗು ಸಂಹಿತಾದ ಲೇಖಕ. ಭೃಗು ಸಂಹಿತೆ ಭಾರತೀಯ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ವಿಕಾಸಕ್ಕೆ ಕಾರಣವಾಗುತ್ತದೆ.
ಹಿಂದೂ ಪುರಾಣದ ಪ್ರಕಾರ, ಸಾಮಾಜಿಕ ಸ್ತರದಲ್ಲಿ ಮೇಲ್ಜಾತಿಯ ಬ್ರಾಹ್ಮಣರಿಗೆ ನೆರವಾಗಲು ಮತ್ತು ತನ್ನ ಮೇಲಿದ್ದ ಲಕ್ಷ್ಮಿಯ ಶಾಪ ತಗ್ಗಿಸಲು ಭೃಗು ಮಹರ್ಷಿ ಭೃಗು ಸಂಹಿತೆಯನ್ನು ಬರೆದರು. ಇದು ಶುಕ್ರ ಮತ್ತು ಮಹರ್ಷಿ ಭೃಗು ನಡುವೆ ನಡೆದ ಮಾತುಕತೆ ರೂಪದ ಗ್ರಂಥವಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ಧೇ ಆದಲ್ಲಿ, ಮನುಷ್ಯನ ಎಲ್ಲ ಸಂಕಟಗಳಿಗೆ ಪರಿಹಾರ ದೊರೆಯಲಿದೆ.
ಹಿಂದೂ ಪುರಾಣ ಮತ್ತು ಇತಿಹಾಸಲ್ಲಿ ಬರುವ ಹಲವು ಋಷಿಮುನಿಗಳು, ರಾಜರು ಹಾಗೂ ಮಹಾಪುರುಷರು ಭೃಗು ಸಂಹಿತೆಯನ್ನು ಉಪಯೋಗಿಸಿದ್ದಾರೆ. ತಮ್ಮ ಬದುಕಿನಲ್ಲಿ ಉಂಟಾದ ತೊಳಲಾಟಗಳಿಂದ ಹೊರಬರಲು ಇಲ್ಲವೇ ಬದುಕನ್ನು ಇನ್ನಷ್ಟು ಸಮೃದ್ಧಗೊಳಿಸಲು ಇದನ್ನು ಬಳಸಿಕೊಂಡಿದ್ದಾರೆ. ಇದು ಕೇವಲ ಕೆಲವರಿಗಷ್ಟೇ ಬೇಕಾದ ಜ್ಞಾನವಲ್ಲ ಬದಲು ನಂಬಿಕೆಯಿಂದ ಇದನ್ನು ಓದಿ ಅನುಸರಿಸಿದರೆ ಎಲ್ಲ ರೀತಿಯ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರ ದೊರೆಯುತ್ತದೆ. ಭೋಜಪತ್ರದ ಮೇಲೆ ಬರೆಯಲಾದ ಭೃಗು ಸಂಹಿತೆ ಹಲವು ಪಾತ್ರ ಅಥವಾ ಅಧ್ಯಾಯಗಳಾಗಿ ವಿಂಗಡಣೆಯಾಗಿದೆ. ಹಲವರು ತಮ್ಮ ಬಳಕೆಗೆ ಒಂದೊಂದು ಭಾಗವನ್ನು ಕೊಂಡೊಯ್ದಿದ್ದರು. ಹೀಗೆ ಹರಿದು ಹಂಚಿ ಹೋಗಿದ್ದ ವಿವಿಧ ವಿಭಾಗಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ ಭೃಗು ಮಹಾಶಾಸ್ತ್ರವನ್ನು ರೂಪಿಸಲಾಗಿದೆ.
ಸಂಗ್ರಹ ಮಾಹಿತಿ.
ಪಿ.ಎಸ್.ರಂಗನಾಥ
No comments:
Post a Comment