ಬಹುಮುಖ ವ್ಯಕ್ತಿತ್ವದ ಸಮಾಜಮುಖಿ ಡಾ. ಕೆ.ಜಿ. ಲಕ್ಷ್ಮಿನಾರಾಯಣಪ್ಪ
ಬಡತನದಲ್ಲಿ ಹುಟ್ಟಿದವರು ಕಡೆತನಕ ಬಡವರಾಗಿಯೇ ಇರಬೇಕೆಂದು ಆ ಬ್ರಹ್ಮ ಬರೆಯಲು ಸಾಧ್ಯವಿಲ್ಲ. ಒಂದು ವೇಳೆ ಹಾಗೇನಾದರೂ ಬರೆದಿದ್ದನೆಂದರೆ ನಮ್ಮ ಬಡತನದ ಗೆರೆಯನ್ನು ಅಳಿಸಿಕೊಳ್ಳಲು ಆ ಭಗವಂತ ಸಾಕಷ್ಟು ಅವಕಾಶಗಳನ್ನು ಕೂಡ ನೀಡಿರಲೇಬೇಕು. ಆಗಲೂ ನಾವು ಎಚ್ಚತ್ತುಕೊಳ್ಳದಿದ್ದರೆ ಶಾಪಗ್ರಸ್ಥರಂತೆ ದೀನರಾಗಿಯೇ ಉಳಿಯಬೇಕಾಗುತ್ತದೆ. ಅದಕ್ಕೆ ಆ ದೇವರು ಹೊಣೆಯಲ್ಲ. ಹೀಗೆ ದೇವರು, ಬಡತನ
ಸಿರಿತನ ದುಡಿಮೆಗಳ ಬಗ್ಗೆ ತಮ್ಮದೇಯಾದ ಸಿದ್ಧಾಂತಗಳನ್ನು ರೂಪಿಸಿಕೊಂಡು ಇತರರಿಗೆ ಸದಾ ಮಾರ್ಗದರ್ಶಕರಂತೆ ಬದುಕುತ್ತಿರುವ ಸಾಹಿತಿ ಚಿಂತಕರಲ್ಲಿ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮಿನಾರಾಯಣಪ್ಪ ಅವರೂ ಒಬ್ಬರು. ಕೇಂದ್ರೀಯ ಅಬಕಾರಿ ಇಲಾಖೆಯಲ್ಲಿ ಓರ್ವ ದಕ್ಷ ಅಧಿಕಾರಿಯಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತರಾದ ಇವರು ಈ ಮೊದಲೇ ತಮ್ಮೊಳಗೆ ಹುದುಗಿದ್ದ ಕಲೆ , ಸಾಹಿತ್ಯ ಸಮಾಜ ಸೇವಾ ಆಸಕ್ತಿಗಳನ್ನು ಮತ್ತಷ್ಟು ಉದ್ದೀಪನಗೊಳಿಸಿಕೊಂಡು ಒಂದೊಂದಾಗಿ ಅನಾವರಣಗೊಳಿಸುವ ಮೂಲಕ ಮೇಲ್ಪಂಗ್ತಿಗೆ
ಬಂದು ನಿಂತವರು. ನಿರಂತರ ಓದು ಬರಹ ಇವರ ಹವ್ಯಾಸ. ಸಾಹಿತಿ ಬರಹಗಾರರೊಂದಿಗೆ ವಿಶೇಷ ಒಡನಾಟ ಇವರದು. ಕುವೆಂಪು, ಬೇಂದ್ರೆ ಆದಿಯಾಗಿ ಡಾ.ಶಿವರುದ್ರಪ್ಪ, ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ ಅವರನ್ನು ಮತ್ತು ಅವರ ಸಾಹಿತ್ಯವನ್ನು ಓದಿಕೊಂಡ ಇವರು ಕನ್ನಡ ಸಾಹಿತ್ಯ ಲೋಕದ ಅನೇಕ ದಿಗ್ಗಜರೊಂದಿಗೆ ಸೌಹಾರ್ದ ಸ್ನೇಹ ಸಲುಗೆ ಹೊಂದಿದಂಥವರು. ತಮ್ಮ ಸಮಕಾಲೀನರೊಂದಿಗೆ ಹರಟೆಗೆ ಮುಂದಾದರೆ ತಮಗಿಂತ ಎಷ್ಟೇ ಕಿರಿಯರಾಗಿದ್ದರೂ ಅವರೊಂದಿಗೆ ಅಹಮ್ಮಿಲ್ಲದೆ ಬೆರೆತುಕೊಳ್ಳುವ ಸರಳ ಸಜ್ಜನಿಕೆ ಇವರ ಮತ್ತೊಂದು ವಿಶೇಷ ಗುಣ ಎಂದು ಕೊಂಡಾಡುತ್ತಾರೆ ಇವರನ್ನು ಹತ್ತಿರದಿಂದ ಬಲ್ಲ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ .ವೆಂಕಟೇಶ್ ಅವರು.
ವಿಶಿಷ್ಟ ಸಾಹಿತಿ, ವಿಮರ್ಶಕ
ದೇಶದ ಪ್ರಧಾನಿಯನ್ನು, ಒಬ್ಬ ಸಾಮಾನ್ಯ ಪೌರ ಕಾರ್ಮಿಕನನ್ನೂ ಆ ದೇವರು ಒಂದೇ ಬಗೆಯಾಗಿ ಸೃಷ್ಠಿಸಿದ್ದಾನೆ. ಈ ಇಬ್ಬರಿಗೂ ಇರುವುದು ೨೪ ಗಂಟೆಗಳೇ. ಆದರೆ, ಪ್ರಧಾನಿ ಹುದ್ದೆಗೇರುವಂತಾಗಲು ಆ ವ್ಯಕ್ತಿ ಪಡೆದ ಶಿಕ್ಷಣ ಹಾಕಿದ ಶ್ರಮ ಸವೆಸಿದ ಹಾದಿ ಮಾತ್ರ ಒಂದೇ ರೀತಿಯಾಗಿರುವುದಿಲ್ಲ. ಅವರವರ ಆಯ್ಕೆ, ಅರ್ಹತೆ, ಬುದ್ಧಿಶಕ್ತಿ ಮತ್ತು ಒದಗಿಬಂದಂಥ ಅವಕಾಶಗಳ ಸದ್ಬಳಕೆ ಸೇರಿದಂತೆ ಮುಂತಾದ ಅಂಶಗಳು ಆಯಾ ವ್ಯಕ್ತಿಯ ಸ್ಥಾನ-ಮಾನಗಳಿಗೆ ಕಾರಣವಾಗುತ್ತವೆ. ಜೊತೆಗೆ ಒಬ್ಬ ಮನುಷ್ಯ ಹಿಂದುಳಿಯಲು ಬರೀ ಬಡತನವೊಂದೇ ಕಾರಣವಾಗುವುದಿಲ್ಲ ಎನ್ನುವ ಇವರು ಬಡತನವನ್ನೇ ಹಾಸಿ ಹೊದ್ದು ಬಡತನದಲ್ಲೇ ಬಂಧಿಯಾಗಿರುವವರ ಬಗ್ಗೆ ಕನಿಕರಪಡುತ್ತಾರೆ ಹೊರತು
ಯಾವತ್ತೂ ಅಸಹ್ಯಪಟ್ಟವರಲ್ಲ. ಮಾತ್ರವಲ್ಲ ಇಂಥ ಬಡ ಮತ್ತು ಅಸಹಾಯಕರ ಕಷ್ಟ-ಕಾರ್ಪಣ್ಯಗಳಿಗೆ ಸಹಾಯದ ಹಸ್ತವನ್ನು ಚಾಚಿದ್ದುಂಟು. ತಮ್ಮ ದುಡಿಮೆಯ ಶೇ.೧೦ರಷ್ಟು ಹಣವನ್ನು ಬಡವರಿಗಾಗಿಯೇ ಮೀಸಲಿಟ್ಟ ಲಕ್ಷ್ಮಿನಾರಾಯಣಪ್ಪ ರಾಯಣಪ್ಪ ಅವರು ಹುಟ್ಟಿನಿಂದಲೂ ಲಕ್ಷಿ÷್ಮÃ ಪುತ್ರರೇನೂ ಅಲ್ಲ! ಒಂದು ಕೈಯಿಂದ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗದಂತೆ ದಾನ-ಧರ್ಮ ಮಾಡುವ ಇವರು ಕೊಟ್ಟು ಕೊಡದಂತಿರುವುದೇ ಇವರ ನೈಜ ಸ್ವಭಾವ. ಇನ್ನು ಕೊಡುವ ಮುನ್ನ, ಕೊಟ್ಟ ನಂತರ ಆ ಬಗ್ಗೆ ಯೋಚಿಸುವಂಥವರೇ ಅಲ್ಲ. ಆಸ್ತಿ-ಅಂತಸ್ತು ಯಾರಿಗೂ ಯಾವತ್ತೂ ಶಾಶ್ವತವಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಕೂಡ ಬೇರೆಯವರ ಕಷ್ಟಗಳಿಗೆ ನೆರವಾಗದಿದ್ದರೆ ಮನುಷ್ಯರಾಗಿದ್ದು ಏನು ಪ್ರಯೋಜನ? ಎಂದು ಕೇಳುವ ಇವರು, ಆ ದೇವರು ಕೊಟ್ಟ ಪ್ರಸಾದದಲ್ಲಿ ಇತರರಿಗೆ ಹಂಚಿ ತಿನ್ನುವುದೇ ಲೇಸು ಎನ್ನುತ್ತಾರೆ. ತೊಂದರೆ ತಾಪತ್ರಯಗಳನ್ನು ಹೇಳಿಕೊಂಡು ಮನೆತನಕ ಸಹಾಯ ಕೇಳಿ ಬಂದವರಿಗೆ ಯಾವತ್ತೂ ಬರಿಗೈಯಿಂದ ಕಳುಹಿಸಿದವರಲ್ಲ ಎನ್ನುತ್ತಾರೆ ಇವರನ್ನು ಬಹಳ ಕಾಲದಿಂದಲೂ ಬಹಳ ಹತ್ತಿರದಿಂದ ಬಲ್ಲವರು. ಒಂದೇ ಮಾತಿನಲ್ಲಿ ಹೇಳುವುದಾದರೆ ಡಾ.ಕೆ.ಜಿ.ಲಕ್ಷ್ಮಿನಾರಾಯಣಪ್ಪ ಅವರದು `ಪರೋಪಕಾರಂ ಇದಂ ಶರೀರಂ' ಎಂಬ ಧ್ಯೇಯ.
ಡಾ. ಲಕ್ಷ್ಮಿನಾರಾಯಣಪ್ಪ ಅವರು ಎಂಎಸ್ಸಿ, ಎಲ್ ಎಲ್ ಬಿ, ಡಿಬಿಎ ಪದವಿಗಳನ್ನು ಬೆಂಗಳೂರು ವಿವಿಯಲ್ಲಿ ಪಡೆದರೆ, ಬಿಸಿಇ ಪದವಿಯನ್ನು ಕೆನಡಾದಲ್ಲಿ ಪಡೆದರು. ಬಳಿಕ ಭಾರತದ ಅಬಕಾರಿ ಮತ್ತು ಸುಂಕ ಇಲಾಖೆಯಲ್ಲಿ ೩೫ ವರ್ಷಗಳ ಕಾಲ ಸುಧೀರ್ಘ ಕರ್ತವ್ಯ ನಿರ್ವಹಿಸಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿ ನಿವೃತ್ತರಾದವರು. `ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು-ಒಂದು ಅಧ್ಯಯನ' ಎಂಬ ಪ್ರಬಂಧವನ್ನು ರಚಿಸಿ ತುಮಕೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಗಳಿಸಿದವರು. ಕಾಲೇಜು ದಿನಗಳಿಂದಲೂ ಬರವಣಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದ ಇವರು ಕಥೆ, ಕವನ, ಅಂಕಣ ಬರಹದ ಮೂಲಕ ಸಾಹಿತ್ಯ ಕೃಷಿ ಮಾಡಿದವರು. ಅಂತೆಯೇ ಇವರ ಅನೇಕ ಬರಹಗಳು ಆಗಾಗ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಲಕ್ಷ್ಮಿನಾರಾಯಣಪ್ಪ ಅವರು ಓದುಗರಿಗೆ ಚಿರಪರಿಚಿತರಾಗುವಂತೆ ಮಾಡಿತು. ನಾಡಿನ ಖ್ಯಾತ ಸಂಶೋಧಕರಾಗಿದ್ದ ಡಾ.ಎಂ.ಚಿದಾನಂದಮೂರ್ತಿಯವರ ಪ್ರೀತಿಗೆ ಪಾತ್ರರಾದವರು ಕೂಡ. ರಾಜ್ಯದ ೧೨ ಲಕ್ಷದಷ್ಟಿರುವ ಪದ್ಮಶಾಲಿ ಜನಾಂಗದವರಲ್ಲಿ ಡಾ.ಕೆ.ಜಿ. ಲಕ್ಷ್ಮಿನಾರಾಯಣಪ್ಪ ಅವರು ಮೊಟ್ಟ ಮೊದಲ ಸಂಶೋಧಕರಾಗಿದ್ದರೆ, ಇಡೀ ನೇಕಾರ ಸಮುದಾಯದ ಒಬ್ಬ ಸಂಶೋಧಕರಾಗಿ ಡಿ.ಲಿಟ್ ಪಡೆದ ನಾಲ್ಕನೇ ವ್ಯಕ್ತಿಯೂ ಇವರೇ.
ದಕ್ಷ, ಪ್ರಾಮಾಣಿಕ ಅಧಿಕಾರಿ
ಮೂಲತ: ತುಮಕೂರು ಜಿಲ್ಲೆಯ ಕೋರ ಹೋಬಳಿಯ ಕೆಸ್ತೂರು ಎಂಬ ಪುಟ್ಟ ಗ್ರಾಮ ಇವರ ಹುಟ್ಟೂರು. ೧೯೫೦ರಲ್ಲಿ ಜನಿಸಿದ ಲಕ್ಷ್ಮಿನಾರಾಯಣಪ್ಪ ಅವರ ತಂದೆ ಗುಂಡಪ್ಪ, ತಾಯಿಯ ಹೆಸರು ಸಂಜೀವಮ್ಮ ಎಂದು. ಕಡು ಬಡತನದ ನೇಕಾರ ಕುಟುಂಬದಿಂದ ಬಂದ ಇವರು ಚಿಕ್ಕಂದಿನಿಂದಲೂ ಕಷ್ಟ ಪಟ್ಟು ಓದಬೇಕಾಯಿತು. ನೇಕಾರಿಕೆ ಮಾಡಿಕೊಂಡಿದ್ದ ಇವರ ತಂದೆಯವರ ಸಂಪಾದನೆಯಲ್ಲಿ ಮನೆಯ ಸಂಸಾರಕ್ಕೇ ಕಾಗುತ್ತಿರಲಿಲ್ಲ. ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕೆಂದು ಎಲ್ಲಿಂದ ಣ ತರಲು ಸಾಧ್ಯ? ಮನೆಯ ಆರ್ಥಿಕ ಪರಿಸ್ಥಿತಿ ಹೀಗಿರುವಾಗ
ಬಾಲಕ ಲಕ್ಷ್ಮಿನಾರಾಯಣಪ್ಪ ತನ್ನ ಹುಟ್ಟೂರನ್ನು ಬಿಟ್ಟು ಗಳೂರಿಗೆ ಬಂದು ಅವರಿವರ ಆಶ್ರಯದಲ್ಲಿದ್ದುಕೊಂಡು ಓದು ಮುಂದುವರಿಸಬೇಕಾಯಿತು. ಆದರೆ, ತನ್ನ ಖರ್ಚು ವೆಚ್ಚಕ್ಕಾಗಿ ಪಾರ್ಟ್ ಟೈಂ ಕೆಲಸಕ್ಕೆ ಹೋಗ ಬೇಕಾಯಿತು. ಮುಂದೆ ತಾನೊಬ್ಬ ದೊಡ್ಡ ಅಧಿಕಾರಿಯಾಗಬೇಕೆಂಬ ದಿಟ್ಟ ಛಲ ಮಾತ್ರ ಇವರು ಇವರು ಯಾವತ್ತೂ ಬಿಟ್ಟಿರಲಿಲ್ಲ. ಜೀವನದ ಆರಂಭ ಕಾಲದಲ್ಲಿ ಬಡತನವನ್ನು ಕಂಡುಂಡ ಇವರು ಶ್ರದ್ಧೆ ಮತ್ತು ಆಸಕ್ತಿಯಿಂದ ಓದಿ ಬಳಿಕ ಸರ್ಕಾರಿ ನೌಕರಿಯೊಂದನ್ನು ಹಿಡಿದುಕೊಂಡು ತಾವಂದುಕೊಂಡಿದ್ದನ್ನು ಸಾಧಿಸದೇ ಬಿಡಲಿಲ್ಲ. ಕಷ್ಟದ ಕಾರ್ಮೋಡಗಳು ಸರಿದು ಮುಂದೆ ಜೀವನದಲ್ಲಿ ಸುಖ ನೆಮ್ಮದಿಯ ನೆˉÉ ದೊರೆತ ಬಳಿಕವೂ ತಮ್ಮ ಹಿಂದಿನ ಕಷ್ಟಗಳನ್ನು ಇವರೆಂದೂ ಮರೆತವರಲ್ಲ. ಕಷ್ಟದಲ್ಲಿದ್ದ ಸ್ನೇಹಿತರನ್ನೂ ಇವರು ಯಾವತ್ತೂ ಕೈ ಬಿಟ್ಟವರಲ್ಲ. ಡಾ.ಲಕ್ಷ್ಮಿನಾರಾಯಣಪ್ಪ ಅವರ ಓದು ವಿಸ್ತಾರವಾದರೂ ಬರವಣಿಗೆ ಬೆರೆಳೆಣಿಕೆಯಷ್ಟು ಎನ್ನುವುದೇ ಸರಿಯಾದುದು. ಆದರೆ, ಬರೆದದ್ದೆಲ್ಲ ಪುಟಕಿಟ್ಟ ಚಿನ್ನವೆಂದರೆ ತಪ್ಪಾಗಲಿಕ್ಕಿಲ್ಲ. ಆಧ್ಯಾತ್ಮಿಕ ತಳಹದಿಯಿಂದ ಬಂದ ಕಾರಣವೋ ಏನೋ ವಿವಿಧ ದತ್ತಿ-ದೇವಾಲಯಗಳ ಆಡಳಿತದ ಜವಾಬ್ದಾರಿಯನ್ನು ಹೊತ್ತುಕೊಂಡು ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದವರು. ಡಾ.ಲಕ್ಷ್ಮಿನಾರಾಯಣಪ್ಪ ಅವರ ಸೇವಾ ಮನೋಭಾವ ಸಮಾಜದ ಬಗ್ಗೆ ಹೊಂದಿರುವ ಅಪಾರ ಕಕ್ಕುಲತೆ ಇತರರ ಬಗ್ಗೆ ಇರುವ ಗೌರವ, ಕನ್ನಡ ನಾಡು-ನುಡಿ, ಜಲ ನೆಲದ ಬಗ್ಗೆ ಹೊಂದಿರುವ ಅಪಾರ ಆದರ-ಅಭಿಮಾನಗಳು ಇವರ ವ್ಯಕ್ತಿತ್ವಕ್ಕೆ ಕಳಶಪ್ರಾಯ.
ನಿಷ್ಕಾಮ ಸಮಾಜ ಸೇವಕ
ದಿನದ ೨೪ ಗಂಟೆಯೂ ಒಂದಿಲ್ಲೊಂದು ಕೆಲಸ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿನಾರಾಯಣಪ್ಪ ಸದಾ ಪಾದರಸದಂತೆ ಓಡಾಡುತ್ತ ಇರುತ್ತಾರೆ. ಸಮುದಾಯ, ಸಂಘಟನೆ, ಸಾಮಾಜಿಕ ಕಳಕಳಿ, ಸಾಹಿತ್ಯಿಕ, ಧಾರ್ಮಿಕ ಇವರ ಸೇವಾ ಕಾರ್ಯಗಳು ಒಂದೇ ಎರಡೆ? ನಿವೃತ್ತಿಯ ಬಳಿಕ ಆರಾಮದಾಯಕ ಜೀವನ ನಡೆಸಬಹುದಾಗಿದ್ದರೂ ಅದಕ್ಕೆ ಅವಕಾಶ ಮಾಡಿಕೊಡದೆ ತಮ್ಮ ಸಮಾಜದವರ ಒಳಿತಿಗಾಗಿ ಟೊಂಕ ಕಟ್ಟಿ ನಿಂತವರು. ಪದ್ಮಶಾಲಿ ನೌಕರರ ಸಂಘ, ಕರ್ನಾಟಕ ಯುವ ಸಾಹಿತ್ಯ ಪರಿಷತ್ತು ಹಾಗೂ ಕೇಂದ್ರೀಯ ಕನ್ನಡ
ಸಂಘ ಸೇರಿದಂತೆ ಮುಂತಾದ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಅಳಿಲು ಸೇವೆ ಸಲ್ಲಿಸಿದವರು. ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಶ್ರೀ ಮಾರ್ಕಂಡೇಯ ಮಹರ್ಷಿ ಗುರುಪೀಠ ಮಹಾಸಂಸ್ಥಾನದ ಧರ್ಮದರ್ಶಿಯಾಗಿಯೂ ಜೊತೆಗೆ ಅದರ ಕೋಶಾಧಿಕಾರಿಯಾಗಿಯೂ ಸದ್ಯ ಸೇವೆಯಲ್ಲಿ ತೊಡಗಿದ್ದಾರೆ. ಅನಾಥ ಹೆಣ್ಣು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಉನ್ನತ ಶಿಕ್ಷಣಕ್ಕಾಗಿ ನೆರವು ಒದಗಿಸುತ್ತಿರುವುದು ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ. ಹಿಂದುಳಿದ ತಮ್ಮ ಸಮಾಜದ ಮಕ್ಕಳಿಗಾಗಿ `ಕೆಜಿಎಲ್ ಪದ್ಮಶಾಲಿ ಐಎಎಸ್/ಯುಪಿಎಸ್‌ಸಿ ಅಕಾಡಮಿ' ಎಂಬ ಹೆಸರಿನಲ್ಲಿ ತರಬೇತಿ ಸಂಸ್ಥೆಯೊಂದನ್ನು ತೆರೆದಿದ್ದಾರೆ. ಇಂಥ ಇನ್ನೂ ಅನೇಕ ಸಮಾಜಮುಖಿ ಕೆಲಸ- ಕಾರ್ಯಗಳಿಗೆಂದೇ ಇವರು ತಮ್ಮ ವೃತ್ತಿ ಜೀವನದಾರಭ್ಯದಿಂದಲೂ ತಮ್ಮ ವೇತನದ ಶೇ.೧೦ ರಷ್ಟು ಹಣವನ್ನು ಖರ್ಚು ಮಾಡುತ್ತ
ಬಂದಿದ್ದಾರೆಂದರೆ ಸಣ್ಣ ಮಾತಲ್ಲ. ಇಷ್ಟೆಲ್ಲ ಸೇವಾ ಕೈಂಕರ್ಯ ಮಾಡಿದ ಕೆ.ಜಿ. ಲಕ್ಷ್ಮಿನಾರಾಯಣಪ್ಪ ಅವರಿಗೆ ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳು ಗೌರವಾದರಗಳು ಲಭಿಸಬೇಕು. ಸಮಾಜಕ್ಕೆ ಪ್ರೇರಣೆಯಂತಿರುವ ಇಂಥವರಿಗೆ ಪ್ರತಿಯಾಗಿ ಸಮಾಜವೂ ಪ್ರೇರಣೆ ಒದಗಿಸಬೇಕು ಅಲ್ಲವೆ?
ಮಾಹಿತಿ:- ನೇಕಾರವಾಣಿ
#KGL #KGlakshminarayanappa #K.G.lakshminarayanappa #ಕೆ.ಜಿ.ಲಕ್ಷ್ಮಿನಾರಾಯಣಪ್ಪ
#padmashali
No comments:
Post a Comment