ತಿರುಮಲ ಶ್ರೀ ಪದ್ಮಾವತಿ (ಲಕ್ಷ್ಮಿ) ದೇವಿ ಪದ್ಮಶಾಲಿ ಮನೆ ಮಗಳು
ಹದಿನೈದನೆಯ ಶತಮಾನದ ಆರಂಭದಲ್ಲಿ, ತಿರುಪತಿ, ತಿರುಚಾನೂರು, ಯೋಗಿ ಮಲ್ಲವರಂ, ನಾರಾಯಣವರಂ ಮುಂತಾದ ಪ್ರಾಂತ್ಯಗಳಲ್ಲಿ ಜೀವನೋಪಾಯಕ್ಕಾಗಿ ಕೈಮಗ್ಗ ವೃತ್ತಿಯನ್ನು ಅವಲಂಬಿಸಿದ್ದ ನೇಕಾರರಲ್ಲಿ ನಮ್ಮ ಪದ್ಮಶಾಲಿ ಸಮಾಜ ಮತ್ತು ಇತರೆ ನೇಕಾರರ ಮಧ್ಯೆ ಒಂದು ವಿವಾದ ಶುರುವಾಗಿತ್ತು. ಅದೇನೆಂದರೆ, ತಿರುಚಾನೂರು ಪದ್ಮಶಾಲಿಗಳು "ಅಲಮೇಲುಮಂಗಮ್ಮ" ನಮ್ಮ ಮನೆಮಗಳು ಅಂತ ಹೇಳಿದರೆ, ಇತ್ತ ಇತರೆ ನೇಕಾರರು "ಇಲ್ಲ ಇಲ್ಲ ನಮ್ಮ ಮನೆಮಗಳು" ಎಂದು, ಪದ್ಮಾವತಿ ದೇವಿಗೆ ತಾವೇ ಮೊದಲಿಗೆ ಅರಿಶಿಣ ಕುಂಕುಮ ಮತ್ತು ಸೀರೆಯನ್ನು ಕೊಡಬೇಕು ಎಂದು ಇಬ್ಬರೂ ವಾದಿಸುತಿದ್ದರು.
ಈ ಸಮಸ್ಯೆ ಯನ್ನ ಆಗಿನ ಚಂದ್ರಗಿರಿಯ ಪ್ರಾಂತ್ಯವನ್ನ ಆಳುತಿದ್ದ ಪುರುಷೋತ್ತಮ ರಾಯರನ್ನ ಕೇಳಿಕೊಂಡರಂತೆ. ಇಂತಹ ಜಟಿಲವಾದ ಸಮಸ್ಯೆಯನ್ನು ಬಗೆಹರಿಸಲು ಎಷ್ಟೇ ಆಲೋಚಿಸಿದರು ಯಾವುದೇ ಪರಿಹಾರ ಸಿಗಲಿಲ್ಲ. ಕೂಡಲೇ ಜಗತ್ಪ್ರಸಿದ್ದ ಮಹಾನ್ ದಾರ್ಶನಿಕ ತಾಳ್ಳಪಾಕ್ಕ ಅನ್ನಮಯ್ಯರವರ ಮೊಮ್ಮಗರಾದ ಚಿನ್ನನ್ನ ಆಚಾರ್ಯರನ್ನ ಕೇಳಿದರಂತೆ. ಚಿನ್ನನ್ನಾಚಾರ್ಯ ರವರ ಇನ್ನೊಂದು ಹೆಸರು ತಾಳ್ಳಪಾಕ ಚಿನತಿರು ವೆಂಗಳನಾಥ.
ಅನ್ನಮಯ್ಯರಿಗೆ ಬಾಲ್ಯದಲ್ಲಿ ಅಲಮೇಲು ಮಂಗಮ್ಮ ಪ್ರಸಾದ ತಿನ್ನಿಸಿದಂತೆ, ವೆಂಗಳನಾಥರಿಗೆ ಸ್ತನಪಾನವನ್ನು ಮಾಡಿಸಿದ್ದರಂತೆ. ಆದ್ದರಿಂದ ಚಿನ್ನನ್ನರಿಗೆ ಕವಿತೆ ಬರೆಯುವ ಕಲೆ ಸಿದ್ದಿಸಿತಂತೆ. ಅದೂ ಅಲ್ಲದೆ ಚಿನ್ನನ್ನರೊಂದಿಗೆ ಯಾವಾಗಂದರೆ ಅವಾಗ ಅಲಮೇಲು ಮಂಗಮ್ಮ ಮಾತನಾಡುತಿದ್ದರಂತೆ.
ಆದ್ದರಿಂದ ಚಿನ್ನನ್ನ ಇಬ್ಬರನ್ನ ಸಮಧಾನಗೊಳಿಸಿ, ದೇವಿ ಅಲಮೇಲು ಮಂಗಮ್ಮರ ಜತೆ ಮಾತನಾಡುತ್ತ, "ತಾಯಿ ಸಮಸ್ಯೆ ಏನಂತ ನಿನಗೆ ತಿಳಿದಿದೆ, ನೀನು ಯಾರ ಮಗಳು ಹೇಳು ಎಂದು ಕೇಳುತ್ತಾನೆ"
ಆಗ ದೇವಿ ಪ್ರತ್ಯಕ್ಷಳಾಗಿ, " ನಾನು ಪದ್ಮಶಾಲಿಗಳ ಮನೆಮಗಳು, ತವರು ಮನೆಯವರಾದ ಪದ್ಮಶಾಲಿಯವರು ನನಗೆ ಮೊದಲು ಅರಿಶಿಣ ಕುಂಕುಮ ಮತ್ತು ಸೀರೆಯನ್ನು ಕೊಡಬೇಕು ಅದರ ನಂತರ ಬೇರೆಯವರ ಗೌರವಾದಾರಗಳನ್ನ ಸ್ವೀಕರಿಸುತ್ತೇನೆ" ಎಂದು ಹೇಳುತ್ತಾಳೆ.
ಅಲಮೇಲು ಮಂಗಮ್ಮ ಹೇಳಿದ ಈ ಸಾಕ್ಷಿಯಿಂದ ಸಮಸ್ಯೆ ಅಲ್ಲಿಗೆ ಮುಗಿಯಿತು. ಕೂಡಲೇ, ಪುರುಷೋತ್ತಮ ರಾಯರು ಅಲ್ಲಿ ದಾಖಲೆ ಬರೆಯಿಸಿ ಆ ಸಮಸ್ಯೆಗೆ ಸುಂಖಾಂತ್ಯವನ್ನಾಡಿದರು. ಶುಭಕೃತ್ತು ನಾಮಸಂವತ್ಸರ, ಕಾರ್ತಿಕ ಹುಣ್ಣಿಮೆ ಗುರುವಾರ 23 ಅಕ್ಟೋಬರ್ 1541 ರಂದು ಈ ಘಟನೆ ನಡೆದಿತ್ತು ಎಂದು ಇತ್ತೀಚೆಗೆ ದೊರೆತ ಶಾಸನವೊಂದರಲ್ಲಿ ಈ ಕುರಿತು ದಾಖಲಾಗಿದೆ.
ಈ ಎಲ್ಲ ಕಾರಣದಿಂದ, ತಿರುಪತಿ, ಶ್ರೀರಂಗಂ, ಅಹೋಬಿಲಂ, ತಿರುಚಾನೂರ್, ನಾರಾಯಣವನಂ, ಶ್ರೀನಿವಾಸ ಮಂಗಾಪುರಂ, ಜಮ್ಮಲಮಡುಗು ಮಂಗಳಗಿರಿ ಮುಂತಾದ 108 ವೈಷ್ಣವ ಕ್ಷೇತ್ರಗಳಲ್ಲಿ ಪದ್ಮಶಾಲಿಗಳೇ ವಸ್ತ್ರಾಭರಣವನ್ನು, ಅರಿಶಿಣ ಕುಂಕುಮ ಕೊಡುತ್ತಾ ಬಂದಿದ್ದಾರೆ.
ತಿರುಪತಿ ದೇವಸ್ಥಾನದವರು ಸಿರಿ ಕೋಲುವು ಎನ್ನುವ ಪುಸ್ತಕ ಪ್ರಕಟಿಸಿದ್ದಾರೆ. ಅದರಲ್ಲಿ ಈ ಬಗ್ಗೆ ಶ್ರೀ ಮಹಾಲಕ್ಷ್ಮಿ ಮತ್ತು ಪದ್ಮಾವತಿ ದೇವಿ ಪದ್ಮಶಾಲಿಯವರ ಮನೆಮಗಳು ಎಂದು ಬರೆಸಿದ್ದಾರೆ.
ಪದ್ಮಾವತಿ ತಾಯಿಗೆ ದೇವಾಲಯ ನಿರ್ಮಾಣ ಮಾಡಲು, ಆ ಕಾಲದಲ್ಲಿ ತಾಳ್ಳಪಾಕ ಚಿನ್ನನ್ನರವರಿಗೆ ಪದ್ಮಶಾಲಿ ಸಮಾಜದವರು ಇಪ್ಪತ್ತು ಸಾವಿರ ವರಹಗಳನ್ನು ನೀಡಿದ್ದರಂತೆ.
ಬರಹ: ಪಿ.ಎಸ್.ರಂಗನಾಥ
ಸಂಗ್ರಹ ಮಾಹಿತಿ
Great. I am so Lucky and Proud to be a "Padmashali"
ReplyDeleteGreat. I am so Lucky and Proud to be a "Padmashali"
ReplyDeleteGreat.jai padmasali....
ReplyDeleteಜೈ ಪದ್ಮಶಾಲಿ
ReplyDeleteGreat we r proud a padmashalis jai padmashali jai jai padmashali
ReplyDeleteJai padmashali
Deleteಜೈ ಪದ್ಮಶಾಲಿ
ReplyDeleteJai padamashali
ReplyDeleteProud to be padmshlee
ReplyDeleteJai Padmashali.
ReplyDelete