ಈ ಭೂಮಿ ಮೇಲೆ ಜನ ಹುಟ್ಟಿದ ಮೇಲೆ ಬಾಳಿ ಬದುಕುವುದಕ್ಕೆ ಒಂದಲ್ಲ ಒಂದು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ ಎನ್ನುವುದನ್ನ ನಾವೆಲ್ಲರೂ ಕಾಣುತಿದ್ದೇವೆ. ಹುಟ್ಟಿದ ಮೇಲೆ ನಾಲ್ಕು ಜನ ಗುರುತಿಸುವಂತಹ ಏನ್ ಸಾಧನೆ ಮಾಡಿದೆ ಅಂತ ಪ್ರಶ್ನೆ ಕೇಳಿದರೆ, ಕೆಲಸ ಮಾಡಿಕೊಂಡು ಜೀವನ ನಡೆಸುವುದೇ ಒಂದು ದೊಡ್ಡ ಸಾಧನೆ ಅದಕ್ಕಿಂತ ಬೇರೆ ಏನು ಮಾಡೋಕಾಗುತ್ತೆ? ಏನಾದರು ಮಾಡಬೇಕೆಂದರೆ, ಸಮಯ ಬೇಕು, ಹಣ ಬೇಕು, ಬೆಂಬಲ ಬೇಕು, ಗಾಡ್ ಫಾದರ್ ಬೇಕು, ಹೀಗೆ ಬೇಕು ಬೇಡಗಳ ಪಟ್ಟಿಯನ್ನ ಜನ ತೆರೆಯುತ್ತಾ ಹೋಗುತ್ತಾರೆ.
ಇಲ್ಲೊಬ್ಬರು ಇದ್ದಾರೆ, ಇವರು ಎಲ್ಲರಂತೆ ಪದವಿ ಪಡೆದು ಕೈಗೆ ಸಿಕ್ಕಿದ ಕೆಲಸ ಮಾಡಿಕೊಂಡು ಇರಬಹುದಿತ್ತು, ಆದರೆ ಸಿನಿಮಾದ ಮೇಲಿನ ಪ್ರೀತಿ, ಸಿನಿಮಾ ರಂಗದಲ್ಲಿ ಏನಾದರು ಸಾಧಿಸ ಬೇಕು ಅಂತ ಕನಸನ್ನ ಹೊತ್ತು ಚಿತ್ರರಂಗದಲ್ಲಿ ಕಾಲಿಟ್ಟು ಹಂತ ಹಂತವಾಗಿ ಬೆಳೆಯುತಿದ್ದಾರೆ ಅವರೇ "ಅವಿರಾಮ್ ಕಂಠೀರವ".
2018 ರಲ್ಲಿ ತೆರೆಕಂಡ ತಾರಕ್ ಪೊನ್ನಪ್ಪ ಅಭಿನಯದ `ಕನ್ನಡ ದೇಶದೋಳ್' ಚಿತ್ರವನ್ನು ಮತ್ತು . 2021 ರಲ್ಲಿ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರಗಳನ್ನನಿರ್ದೇಶಿಸಿದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಇವರು.
ಇವರು ಪದ್ಮಶಾಲಿ ಸಮಾಜದ ತುಮ್ಮ ಮನೆತನಕ್ಕೆ ಸೇರಿದವರು, ತಂದೆ ತುಮ್ಮ ಶ್ರೀ ಪಿ.ವಿ.ನಾಗಭೂಷಣ್ ಮತ್ತು ತಾಯಿ ಶ್ರೀಮತಿ ನ್ಯಾಯಂ ರಮಾಮಣಿ ದಂಪತಿಗಳ ಪುತ್ರ. ಊರು ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ. ವಿದ್ಯಾಭ್ಯಾಸ BSC in microbiology.
ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹಠ ಹಿಡಿದು, ಯಾವ ನಂಟು, ಯಾವ ಗಾಡ್ ಫಾದರ್ ಇಲ್ಲದೆ ಇದ್ದರು ಮೊದಲಿಗೆ ಸಹಾಯ ನಿರ್ದೇಶಕನಾಗಿ ನಂತರ ಸಹ ನಿರ್ದೇಶಕನಾಗಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿ ನಂತರ ಸ್ವತಂತ್ರ ನಿರ್ದೇಶಕನಾಗಿದ್ದಾರೆ ಅವಿರಾಮ್.
ಅವರ ಸಾಧನೆಗಳು ಈ ಕೆಳಗಿನಂತಿವೆ: -
ನಿರ್ದೇಶಿದ ಚಲನಚಿತ್ರಗಳು: -
1. 2011 ರಲ್ಲಿ ಬಿಡುಗಡೆಯಾದ "ನೂರಾರು ಕನಸು" ಮಕ್ಕಳ ಚಲನಚಿತ್ರ. ( ಸರ್ಕಾರಿ ಶಾಲೆ ಮತ್ತು ಕಾನ್ವೆಂಟ್ ಮಕ್ಕಳ ಮನಸ್ಥಿತಿಯನ್ನು ಸಾರುವ ಚಲನ ಚಿತ್ರ )
2. 2014 ರಲ್ಲಿ "ಅನ್ನದಾತಂ ಶರಣಂ" ಎಂಬ ರೈತರನ್ನು ಶ್ಲಾಘಿಸುವ ದೃಶ್ಯಗೀತೆಯನ್ನು ರಚಿಸಿ, ನಿರ್ದೇಶನದ ಜೊತೆಗೆ ನಿರ್ಮಾಣ.
3. 2015 ರಲ್ಲಿ " ಇಂಡಿಯಾ ರೇಪ್ಡ್ " ಎಂಬ ಭಾರತದ ಭ್ರಷ್ಟಾಚಾರ ವಿರೋಧಿಸುವ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ.
4. 2016 ಲ್ಲಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾಮಾಜಿಕ ಜಾಲತಾಣ Facebook ನಲ್ಲಿ ಧಾರವಾಹಿ ನಿರ್ದೇಶನದ ಜೊತೆಗೆ ನಿರ್ಮಾಣ.
5. 2018 ರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ "ಕನ್ನಡ ದೇಶದೊಳ್" ಎಂಬ ಅಪ್ಪಟ ಕನ್ನಡಮಯ ಚಲನಚಿತ್ರ ನಿರ್ದೇಶನದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ದೇಶದೊಳ್ ಅಭಿಯಾನದ ಹಲವಾರು ಕಾರ್ಯಕ್ರಮಗಳ ಆಯೋಜನೆ.
6. 2021 ರಲ್ಲಿ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರದ ನಿರ್ದೇಶನ.
7. 2022 ರಲ್ಲಿ ರಾಘವೇಂದ್ರ ರಾಜ್ ಕುಮಾರ್ ರವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ " ಆಪರೇಷನ್ ಯು " ಎಂಬ ಕಮರ್ಷಿಯಲ್ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಚಿತ್ರಕ್ಕೆ ನಿರ್ದೇಶನ.
8. ಇಲ್ಲಿಯವರೆಗೆ ಕರ್ನಾಟಕದ 13 ಜಿಲ್ಲೆಗಳ ಕುರಿತು ಸರ್ಕಾರದಿಂದ ನಿರ್ಮಾಣ ಆಗಿರುವ ಆಯಾ ಜಿಲ್ಲೆಗಳ ಸಾಕ್ಷ್ಯಚಿತ್ರದ ನಿರ್ದೇಶನ.
2018 ರಲ್ಲಿ ಬಿಡುಗಡೆಯಾದ ಕನ್ನಡ ನಾಡು ನುಡಿಯ ಬಗೆಗಿನ ‘ಕರುನಾಡಲ್ಲಿ ಕನ್ನಡಿಗನೇ ಕಂಠೀರವ’ ಎಂಬ ಅಡಿಬರಹ ಇದ್ದ "ಕನ್ನಡ ದೇಶದೊಳ್" ಚಲನಚಿತ್ರ , ಚಿತ್ರದಲ್ಲಿ ಇವತ್ತಿನ ಕನ್ನಡ ಯಾವ ಪರಿಸ್ಥಿತಿಯಲ್ಲಿದೆ, ಮುಂದೇನು ಆಗುತ್ತದೆ ಎಂಬುದನ್ನು ಕಮರ್ಷಿಯಲ್ ಮಾದರಿಯಲ್ಲೇ ಚಿತ್ರದಲ್ಲಿ ತೋರಿಸಿದ್ದಾರೆ. ಈ ಸಿನಿಮಾ ಬೆಂಗಳೂರಿನ ಈಗಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ, ಚಿತ್ರದಲ್ಲಿ ಯಾವುದನ್ನೂ ವೈಭವೀಕರಿಸದೆ ಎಲ್ಲವನ್ನೂ ನೈಜವಾಗಿ ತೋರಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಭಾಷೆಯು ಆಟೋದ ಮೇಲೆ, ಫೇಸ್ಬುಕ್ನಲ್ಲಿ ಚಾಲ್ತಿಯಲ್ಲಿದ್ದರೆ ಸಾಕಾಗುವುದಿಲ್ಲ. ಇದು ಎಲ್ಲಾ ಕಡೆ ಪಸರಿಸಬೇಕು. ಇದಕ್ಕಾಗಿ ಹೋರಾಟ ಮಾಡುವುದನ್ನು ಚಿತ್ರರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದರು. ಸಂಪೂರ್ಣವಾಗಿ ಹೊಸಬರನ್ನೇ ಹಾಕಿಕೊಂಡುಈ ಚಿತ್ರವನ್ನ ನಿರ್ಮಿಸಿದ್ದರು.
2021 ರಲ್ಲಿ ಬಿಡುಗಡೆಯಾದ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರ, ಚಿತ್ರರಸಿಕರ ಮನಗೆದ್ದಿತ್ತು. ಎರಡನೇ ಲಾಕ್ ಡೌನ್ ನಂತರ ಬಿಡುಗಡೆಯಾದ ಮೊದಲ ಚಲನ ಚಿತ್ರ ಕಲಿವೀರ. ಅದ್ಭುತವಾದ ಮೇಕಿಂಗ್ ನಿಂದ ಅತ್ಯುತ್ತಮ ವಿಮರ್ಶೆಗಳನ್ನ ಈ ಚಿತ್ರ ಪಡೆದಿತ್ತು. ದಕ್ಷಿಣ ಭಾರತದ ಚಿತ್ರರಂಗದಲ್ಲೇ ಮೊದಲ ಬಾರಿಗೆ ಕಲಿವೀರ ಸಿನಿಮಾದಲ್ಲಿ ರಿಯಲ್ ಸ್ಟಂಟ್ಸ್ ಪ್ರದರ್ಶಿಸಲಾಗಿತ್ತು. OTT ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲು ಪ್ರಸಿದ್ದ ಕಂಪನಿಗಳು ಸಂಪರ್ಕಿಸಿದ್ದಾರೆ, ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರವನ್ನ OTT ಪ್ಲಾಟ್ ಫಾರ್ಮ್ ನಲ್ಲಿ ನೋಡಬಹುದಾಗಿದೆ.
ಮುಂದಿನ ಚಿತ್ರ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಆಪರೇಷನ್ ಯು' ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ-ಲಾಸ್ಯ ನಾಗರಾಜ್ ನಾಯಕಿಯರಾಗಿ ನಟಿಸುತಿದ್ದಾರೆ. ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ.
ವಿದ್ಮಯಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮಂಜುನಾಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆರ್ಮುಗ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ ಅವಿನಾಶ್, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸುತಿದ್ದಾರೆ.
ಅವಿರಾಮ್ ಅವರು ಪ್ರತಿ ಸಿನಿಮಾದಲ್ಲೂ ಒಂದಲ್ಲ ಒಂದು ಹೊಸ ಪ್ರಯತ್ನವನ್ನ ಮಾಡುತ್ತಾರೆ, ಕನ್ನಡ ದೇಶದೋಳ್ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದ್ದರು. ಕಲಿವೀರದಲ್ಲಿ ರಿಯಲ್ ಸ್ಟಂಟ್ಸ್ ಹೊಸ ಬಗೆಯ ಮೋಶನ್ ಪೋಸ್ಟರ್, ಈಗ ಆಪರೇಶನ್ ಯು ಎನ್ನುವ ಹೊಸ ರೀತಿಯ ಚಿತ್ರದ ಹೆಸರು. ಇವರ ಅವಿರತ ಶ್ರಮದಿಂದ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನದನ್ನ ಸಾಧಿಸಲು ಸತತ ಪ್ರಯತ್ನಿಸುತಿದ್ದಾರೆ.
ದೊಡ್ಡ ನಟರ ಜತೆ ಹಾಗೂ ದೊಡ್ಡ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸಮಾಡಲು ಅವಕಾಶಕ್ಕಾಗಿ ಕಾಯುತಿದ್ದಾರೆ, ಇನ್ನೂ ಹೆಚ್ಚಿನದನ್ನ ಚಿತ್ರರಂಗದಲ್ಲಿ ಸಾಧಿಸುವ ಆಕಾಂಕ್ಷೆ, ಹಂಬಲ ಇವರ ಮನದಲ್ಲಿದೆ. ದೇವರು ಇವರಿಗೆ ಇನ್ನೂ ಹೆಚ್ಚಿನ ಅವಕಾಶವನ್ನ ಕೊಟ್ಟು ದೊಡ್ಡ ಯಶಸ್ಸನ್ನ ಹೆಸರು, ಕೀರ್ತಿ ಗಳಿಸಿ ನಮ್ಮ ಪದ್ಮಶಾಲಿ ಸಮಾಜಕ್ಕೆ ಹೆಸರನ್ನು ತರಬೇಕೆನ್ನುವುದು ನಮ್ಮ ಆಶಯ.
No comments:
Post a Comment